PM ಆವಾಸ್ ಯೋಜನೆ 2.0: ಮನೆ ಇಲ್ಲದವರಿಗೆ ಉಚಿತ ಮನೆ ಭಾಗ್ಯ. ಇಂದೆ ಅರ್ಜಿ ಸಲ್ಲಿಸಿ!

ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ. ಈ ಯೋಜನೆಯು ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ, ವಿಶೇಷವಾಗಿ ಮನೆ ಇಲ್ಲದವರಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಜಾರಿಗೆ ಮಾಡಿದ್ದಾರೆ.

ಯಾವುದು ಈ ಯೋಜನೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಡವರು, ಹಿಂದುಳಿದ ವರ್ಗದವರು ಮತ್ತು ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ ಕಟ್ಟಿಸಿ ಕೊಡಲು ಅಥವಾ ಮನೆ ನಿರ್ಮಿಸಲು ಆರ್ಥಿಕ ಸಹಾಯ ಒದಗಿಸಲು ಜಾರಿಗೆ ತಂದಿದ್ದಾರೆ ಈ ಯೋಜನೆಯನ್ನ. 

2015ರಲ್ಲಿ ಆರಂಭವಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ, 2024-25ಕ್ಕೆ ಹೆಚ್ಚುವರಿ ಗುರಿ ಹೊಂದಿ 3 ಕೋಟಿ ಮನೆಗಳ ನಿರ್ಮಾಣ ಯೋಜನೆಯೊಂದಿಗೆ ಮುಂದುವರಿಯುತ್ತಿದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶ:

1. ಬಡ ಕುಟುಂಬಗಳಿಗೆ ಉಚಿತ ಮನೆ ನೀಡುವುದು.

2. ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ.

3. ನಗರ ಮತ್ತು ಗ್ರಾಮೀಣ ಪ್ರದೇಶದ ಮನೆ ಇಲ್ಲದವರಿಗೆ ವಾಸಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು.

ಸಾಲ ಸೌಲಭ್ಯ:

Pm aawas Yojana 2.0
Pm aawas Yojana 2.0

ನಗರ ಪಟ್ಟಿ: ಸರ್ಕಾರ 2.36 ಲಕ್ಷ ರೂಪಾಯಿಯ ಆರ್ಥಿಕ ಸಹಾಯ ನೀಡುತ್ತದೆ ಇದು ನಗರದಲ್ಲಿ ವಾಸಿಸುವಂತಹ ಜನಗಳಿಗೆ. 10 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಲಭ್ಯವಿರುತ್ತದೆ.

ಗ್ರಾಮೀಣ ಪಟ್ಟಿ: 1.5 ಲಕ್ಷ ರೂ. ಆರ್ಥಿಕ ಸಹಾಯ ಇದಕ್ಕೆ ಅವಲ ಗ್ರಾಮದ ಜನಗಳಿಗೆ. 6 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:

  • ಅಭ್ಯರ್ಥಿ 18 ವರ್ಷ ಪೂರೈಸಿರಬೇಕು.
  • ನಿಮ್ಮ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
  • ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಬುಕ್ ಇತ್ಯಾದಿ ದಾಖಲೆಗಳು ಕಡ್ಡಾಯ.
  • ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು ಇವರಿಗೆಲ್ಲ ಮೊದಲ ಆದ್ಯತೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ನೀವು ನೇರವಾಗಿ ಗ್ರಾಮ ಒನ್ ಅಥವಾ ಆನ್‌ಲೈನ್ ಸೆಂಟರ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸುಲಭವಾಗಿದ್ದು, ನೀವು ಕಮನ್ ಸರ್ವಿಸ್ ಸೆಂಟರ್ (CSC) ಮೂಲಕ ಈ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗೆ ಬೇಕಾದ ಮುಖ್ಯ ದಾಖಲೆಗಳು:

  • ಪಡಿತರ ಚೀಟಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಇತ್ತೀಚಿನ ಭಾವಚಿತ್ರ
  • ಬ್ಯಾಂಕ್ ಪಾಸ್‌ಬುಕ್
  • ಆಧಾರ್ ಕಾರ್ಡ್

ಈ ಯೋಜನೆಯಿಂದ ಮನೆ ಇಲ್ಲದವರು ಸುಲಭವಾಗಿ ಮನೆ ಭಾಗ್ಯ ಪಡೆದುಕೊಳ್ಳಬಹುದು ಹಾಗೆ ತಮ್ಮ ಜೀವನವನ್ನು ಸುಧಾರಿಸಬಹುದು. ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಮತ್ತು ಈ ಮಹತ್ವದ ಯೋಜನೆಯ ಲಾಭ ಲಾಭ ಪಡೆದುಕೊಳ್ಳಬಹುದು.

Leave a Comment