ಹೈನುಗಾರಿಕೆ, ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆಗೆ 50% ಸಬ್ಸಿಡಿ ಎಲ್ಲ ರೈತರು ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ!

ಇಂದಿನ ಲೇಖನದ ಮೂಲಕ ಕೇಂದ್ರ ಸರ್ಕಾರ ನೀಡುತ್ತಿರುವ ಒಂದು ಮಹತ್ವದ ಯೋಜನೆ ಕುರಿತು ತಿಳಿಸಲಾಗಿದೆ. ಈ ಯೋಜನೆಯಡಿ ಹೈನುಗಾರಿಕೆ, ಕುರಿ, ಕೋಳಿ, ಮೇಕೆ ಮತ್ತು ಹಂದಿ ಸಾಕಾಣಿಕೆ ಮಾಡುವ ರೈತರಿಗೆ 50% ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಯಿಂದ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಪಶುಪಾಲನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತದೆ.

ಈ ಯೋಜನೆಯ ಮಾಹಿತಿ, ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಸಬ್ಸಿಡಿ ವಿವರಗಳು ಈ ಕೆಳಗಿನಂತೆ ವಿವರಿಸಲಾಗಿದೆ:

ಯೋಜನೆ ಸಂಪೂರ್ಣ ವಿವರಗಳು:

📌 ಹೈನುಗಾರಿಕೆ:

ಮಿಶ್ರತಳಿ ದನ: ಪ್ರತಿ ಹಸುವಿಗೆ ₹14,000 (2 ಹಸುವಿಗೆ ₹28,000).

ಎಮ್ಮೆ: ಪ್ರತಿ ಎಮ್ಮೆಗೆ ₹16,000 (2 ಎಮ್ಮೆಗೆ ₹32,000).

📌 ಕುರಿ ಸಾಕಾಣಿಕೆ:

10+1 ಕುರಿಗಳಿಗೆ ₹24,000 (ಕಟ್ಟಿಮೇಯಿಸುವ) ಮತ್ತು ₹12,000 (ಬಯಲಿನಲ್ಲಿ ಮೇಯಿಸುವ).

20+1 ಕುರಿಗಳಿಗೆ ₹48,000 (ಕಟ್ಟಿಮೇಯಿಸುವ) ಮತ್ತು ₹24,000 (ಬಯಲಿನಲ್ಲಿ ಮೇಯಿಸುವ).

📌 ಮೇಕೆ ಸಾಕಾಣಿಕೆ:

10+1 ಮೇಕೆಗೆ ₹24,000 (ಕಟ್ಟಿಮೇಯಿಸುವ) ಮತ್ತು ₹13,000 (ಬಯಲಿನಲ್ಲಿ ಮೇಯಿಸುವ).

20+1 ಮೇಕೆಗೆ ₹48,000 (ಕಟ್ಟಿಮೇಯಿಸುವ) ಮತ್ತು ₹26,000 (ಬಯಲಿನಲ್ಲಿ ಮೇಯಿಸುವ).

📌 ಹಂದಿ ಸಾಕಾಣಿಕೆ:

10 ಹಂದಿಗಳಿಗಾಗಿ ₹60,000.

📌 ಕೋಳಿ ಸಾಕಾಣಿಕೆ:

ಮಾಂಸ ಕೋಳಿಗಳಿಗೆ (2,000 ಕೋಳಿ): ₹1,60,000.

ಮೊಟ್ಟೆ ಕೋಳಿಗಳಿಗೆ (1,000 ಕೋಳಿ): ₹1,80,000.

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್: ರೈತರ ಗುರುತಿನ ದೃಢೀಕರಣಕ್ಕಾಗಿ.

ಪಹಣಿ ಪತ್ರ: ಜಮೀನು ಸಂಬಂಧಿತ ದಾಖಲೆ.

ಬ್ಯಾಂಕ್ ಖಾತೆ ವಿವರಗಳು: ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, IFSC ಕೋಡ್.

ಫೋಟೋ: ಅರ್ಜಿದಾರನ ಭಾವಚಿತ್ರ.

Farming subsidy
Farming subsidy

ಗಮನಿಸಿ: ಅರ್ಜಿ ಸಲ್ಲಿಸಲು IFSC ಕೋಡ್ ಸರಿಯಾಗಿ ನಮೂದಿಸುವುದು ಕಡ್ಡಾಯವಾಗಿರುವುದು..

ಅರ್ಜಿ ಸಲ್ಲಿಸುವ ವಿಧಾನ:

1. ಹತ್ತಿರದ ಪಶುಪಾಲನ ಮತ್ತು ಪಶು ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಿ.

2. ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.

3. ಅರ್ಜಿ ಸ್ಥಿತಿ ಕುರಿತು ತಾಲೂಕಾ ಸಹಾಯ ನಿರ್ದೇಶಕರು ಅಥವಾ ಜಿಲ್ಲಾ ಉಪನಿರ್ದೇಶಕರೊಂದಿಗೆ ಸಂಪರ್ಕಿಸಬಹುದು.

ಯೋಜನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ:

ಈ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಬಳಸುವ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಪಶುಪಾಲನೆಗೆ ಸಂಬಂಧಿಸಿದ ನಿರ್ವಹಣಾ ವೆಚ್ಚಕ್ಕೆ ಕೇಂದ್ರ ಸರ್ಕಾರ ಈ ಯೋಜನೆ ಅಡಿಯಲ್ಲಿ ಉತ್ತಮ ನೆರವನ್ನು ಒದಗಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ:

ತಕ್ಷಣವೇ ಹತ್ತಿರದ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಕಚೇರಿಯೊಂದಿಗೆ ಸಂಪರ್ಕಿಸಿ. ಹೆಚ್ಚಿನ ಮಾಹಿತಿ ಗೋಸ್ಕರ ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪಡೆಯಬಹುದು.

ನೋಟಿಸ್:

ನೀವು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರೆಂದು ಬಯಸಿದರೆ, ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಅಥವಾ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ.

ಈ ಮಾಹಿತಿ ಇತರ ರೈತರಿಗೆ ಬಹಳ ಸಹಾಯ ಕಾರ್ಯವಾಗಿದೆ ಎಂದು ನಾವು ಬಯಸುತ್ತೇವೆ ತಪ್ಪದೇ ಇದನ್ನು ಶೇರ್ ಮಾಡಿ .

Leave a Comment